ಒಂದು ಹಳೆಯ ಸೈಕಲ್ಲ ಟಾಯರು
* ಅರುಣ ಕೊಲಾಟ್ಕರ್

from: google images
೧.
ಒಂದು ಹಳೆಯ ಸೈಕಲ್ಲ ಟಾಯರು
ನಾನಿರಬಹುದು,
ಗಾಲಿಯಿಂದ ಸುಲಿದಿಟ್ಟ ಬೋಳು
ಕೊನೆಯಿರದ ಹಾವುಮೀನು,
ಥರಥರ ನಡುಗುವ ಸೊನ್ನೆ,
ಸ್ನಾಯುವಾತದ ಗೋಳ,
ಅಂದಮಾತ್ರಕ್ಕೆ ಅರ್ಥ
ತಯಾರಾದೆನೆಂದಲ್ಲ
ಚಾವಣಿಯ ತುದಿಯಲ್ಲಿ
ನೇತುಬೀಳಲು
ಅಥವಾ ಒದ್ದೆ ಅಟ್ಟದಲ್ಲಿ
ಬಿದ್ದು ಕೊಳೆಯಲು
ಸಹವಾಸದಲ್ಲಿರುವಂತೆ,
ಮೂರು ಕಾಲಿನ ಕುರ್ಚಿ
ಕಿವಿಯಿಂದ ಕಿವಿಯಗಲಕ್ಕೆ ಹರಕು ನಗುವ
ಎಡಗಾಲಿನ ಷೂ
ಹಾಗೂ ಹೊಲಸು ವರ್ತುಲದಂತ
ನನ್ನ ತುಲ್ಲಿನಲ್ಲಿ
ಸಿಕ್ಕಿಬಿದ್ದಿರುವ
ಅನಾಥ ಬಸವನ ಹುಳು.